ನೆರವಾಗುವ ವಿಧಾನ

This page is a translated version of the page How to contribute and the translation is 98% complete.
Outdated translations are marked like this.


ಎಲ್ಲಾ ವಿಕಿಮೀಡಿಯಾ ಯೋಜನೆಗಳು ವಿಷಯವನ್ನು ಉಚಿತ ಪರವಾನಗಿಗಳ ಅಡಿಯಲ್ಲಿ ಬಿಡುಗಡೆ ಮಾಡಲಾಗುತ್ತದೆ. ಈ ಅಗಾಧವಾದ ಉಚಿತ ಜ್ಞಾನವನ್ನು ಪಡೆಯಲು, ಮರುಸೃಷ್ಟಿಸಲು ಮತ್ತು ಬೆಳೆಸಲು ಕೋಡ್ ಬರೆಯಿರಿ. API ನೊಂದಿಗೆ ಪ್ರಾರಂಭಿಸಲು ಟ್ಯುಟೋರಿಯಲ್ ಅನ್ನು ಅನುಸರಿಸಿ, ಎಲ್ಲಾ ಮೀಡಿಯಾವಿಕಿ ವಿಕಿಗಳಲ್ಲಿ ಮತ್ತು ವಿಷಯ ಹಾಗೂ ವಿಕಿಡೇಟಾಕ್ಕಾಗಿ ಇತರ API ಗಳಲ್ಲಿ ಲಭ್ಯವಿದೆ. XML ಮತ್ತು SQL ಡಂಪ್‌ಗಳು ಸೇರಿದಂತೆ ಇತರ ಮುಕ್ತ ಡೇಟಾ ಮೂಲಗಳು ಸಹ ಲಭ್ಯವಿದೆ.
ನಮ್ಮ ಕೋಡ್ ಎಲ್ಲಾ ಉಚಿತ ಮತ್ತು ಮುಕ್ತ ಮೂಲವಾಗಿದೆ. ಪ್ರಾಜೆಕ್ಟ್ ಅನ್ನು ಆಯ್ಕೆಮಾಡಿ, ಪ್ಯಾಚ್ ಅನ್ನು ಒದಗಿಸಿ ಮತ್ತು ಕಾರ್ಯವನ್ನು ಸರಿಪಡಿಸಿ!

ವಿಕಿಮೀಡಿಯಾ ಯೋಜನೆಗಳು ವಿವಿಧ ರೀತಿಯ ಭಾಷೆಗಳನ್ನು ಒಳಗೊಂಡಿವೆ. ಅವುಗಳೆಂದರೆ, MediaWikiದಲ್ಲಿ PHP ಮತ್ತು JavaScript ಮತ್ತು ಅದರ ವಿಸ್ತರಣೆಗಳು, ಲುವಾ (ಟೆಂಪ್ಲೇಟ್‌ಗಳಲ್ಲಿ), CSS/LESS (ಸ್ಕಿನ್ಸ್ ಇತ್ಯಾದಿಗಳಲ್ಲಿ), ಆಬ್ಜೆಕ್ಟಿವ್-C, ಸ್ವಿಂಗ್ ಮತ್ತು ಜಾವಾ (ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು Kiwix), ಪೈಥಾನ್ (ಪೈವಿಕಿಬಾಟ್ ನಲ್ಲಿ), C++ ([[m ನಲ್ಲಿ] :ಹಗಲ್|ಹಗಲ್]]), ಅಥವಾ C# (AWB ನಲ್ಲಿ).

ವಿಷಯವನ್ನು ಪ್ರಕ್ರಿಯೆಗೊಳಿಸಲು bots ಅನ್ನು ರಚಿಸಿ ಮತ್ತು Toolforge ನಲ್ಲಿ ನಿಮ್ಮ ಪರಿಕರಗಳನ್ನು ಹೋಸ್ಟ್ ಮಾಡಿ. ಮೊಬೈಲ್ ಅಪ್ಲಿಕೇಶನ್‌ಗಳು ಅಥವಾ ಡೆಸ್ಕ್‌ಟಾಪ್ ಅಪ್ಲಿಕೇಶನ್‌ಗಳಲ್ಲಿ ಹ್ಯಾಕ್ ಮಾಡಿ. ಅಥವಾ Site Reliability Engineering ಸರ್ವರ್ ಕಾನ್ಫಿಗರೇಶನ್ ನಿರ್ವಹಿಸಲು ಸಹಾಯ ಮಾಡಿ.

New Developers/Introduction to the Wikimedia Technical Ecosystem ನಲ್ಲಿ ಇನ್ನಷ್ಟು ತಿಳಿಯಿರಿ.
ಸಾಮರ್ಥ್ಯ ಮಾಪನ
PHPUnit ಪರೀಕ್ಷೆ, Selenium ಮೂಲಕ ಸ್ವಯಂಚಾಲಿತ ಬ್ರೌಸರ್ ಪರೀಕ್ಷೆ, ಮತ್ತು ನಿರಂತರ ಏಕೀಕರಣ ಮೂಲಕ ನಮ್ಮ ಯೋಜನೆಗಳ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಿ. ನಿಮ್ಮ ಮೊದಲ ದೋಷವನ್ನು ವರದಿ ಮಾಡಿ ಅಥವಾ ಅಸ್ತಿತ್ವದಲ್ಲಿರುವ ಬಗ್ ವರದಿಗಳ ಮೂಲಕ ಸಹಕರಿಸಿ.
ಟೆಕ್ ರಾಯಭಾರಿ, ಇತರ ವಿಕಿಮೀಡಿಯನ್ನರಿಗೆ ಸಹಾಯ ಮಾಡಿ; ತಾಂತ್ರಿಕ ಸಮಸ್ಯೆಗಳೊಂದಿಗೆ, ಬಳಕೆದಾರರ ಮೇಲೆ ಏನು ಪರಿಣಾಮ ಬೀರಲಿದೆ ಎಂಬುದರ ಕುರಿತು ತಿಳಿಸಲು ಟೆಕ್ ನ್ಯೂಸ್ ಅನ್ನು ಪ್ರಸಾರ ಮಾಡಿ. ರಾಯಭಾರಿಗಳ ಗುಂಪು ಮತ್ತು ಮೇಲಿಂಗ್ ಪಟ್ಟಿಸೇರಿಕೊಂಡು ಡೆವಲಪರ್‌ಗಳು ಮತ್ತು ನಿಮ್ಮ ಸ್ಥಳೀಯ ವಿಕಿ ನಡುವಿನ ಸೇತುವೆಯಾಗಿ ಕಾರ್ಯನಿರ್ವಹಿಸಿ.
ಆಂಗ್ಲ ಬರಹಗಾರರು MediaWiki ದಸ್ತಾವೇಜನ್ನು, ಇತರ ಅಗತ್ಯ ಬೆಂಬಲ ಪುಟಗಳು ಮತ್ತು ಈ ವೆಬ್‌ಸೈಟ್‌ನ ಯಾವುದೇ ಪುಟವನ್ನು ಸುಧಾರಿಸಬಹುದು.
ನೀವು ಇಂಗ್ಲಿಷ್ ಅನ್ನು ಹೊರತುಪಡಿಸಿ ಬೇರೆ ಭಾಷೆಯಲ್ಲಿ ನಿರರ್ಗಳವಾಗಿದ್ದರೆ ನೀವು ಈ ವೆಬ್‌ಸೈಟ್ ಮತ್ತು MediaWiki ಸಾಫ್ಟ್‌ವೇರ್ ಅನ್ನು ಅನುವಾದಿಸುವ ಮೂಲಕ ಈ ಪ್ರಯತ್ನಕ್ಕೆ ಸೇರಬಹುದು.
ಬೆಂಬಲ ಡೆಸ್ಕ್ ಅಥವಾ ಮೀಡಿಯಾವಿಕಿ ಸಂವಹನ ಮತ್ತು ಸಾಮಾಜಿಕ ಮಾಧ್ಯಮ ಚಾನಲ್‌ಗಳಲ್ಲಿ ಉತ್ತರಗಳನ್ನು ಹುಡುಕುತ್ತಿರುವ ಬಳಕೆದಾರರು ಮತ್ತು ಡೆವಲಪರ್‌ಗಳಿಗೆ ಸಹಾಯ ಮಾಡಿ.
UX ಪ್ರತಿಕ್ರಿಯೆಗಾಗಿ ಹುಡುಕುತ್ತಿರುವ ಯೋಜನೆಗಳಲ್ಲಿ ವಿಕಿಮೀಡಿಯಾ ವಿನ್ಯಾಸ ತತ್ವಗಳನ್ನು ಅನ್ವಯಿಸಲು ಸಹಾಯ ಮಾಡಿ.
ಇತರ ಸಮುದಾಯದ ಸದಸ್ಯರನ್ನು ಆನ್‌ಲೈನ್ ಅಥವಾ ವೈಯಕ‍್ತಿಕವಾಗಿ ಭೇಟಿ ಮಾಡಿ.
ಮೀಡಿಯಾವಿಕಿ ಮತ್ತು ವಿಕಿಮೀಡಿಯಾ ತಂತ್ರಜ್ಞಾನಗಳಿಗೆ ಮಾರ್ಗದರ್ಶನ ಹೇಗೆ ಮತ್ತು ನಡೆದಾಡುವ ವಿಧಾನಗಳೇನು?

ಹೆಚ್ಚು ಉಪಯುಕ್ತ ಮಾಹಿತಿ

ಸಂವಹನ

ಮೀಡಿಯಾವಿಕಿಯಲ್ಲಿ ಸಂಪಾದನೆ ಮತ್ತು ಚರ್ಚೆ

ನೀವು ಈ ಮೊದಲು ಮೀಡಿಯಾವಿಕಿಯನ್ನು ಬಳಸದಿದ್ದರೆಃ